ಮನುಷ್ಯ ಹಣವನ್ನು ಗೌರವಿಸುತ್ತ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾನೆ, ಹಿಂದೆಲ್ಲಾ ಜನರು ತಮ್ಮ ಹಿರಿಯರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಆದರೆ, ಈಗಿನ ಜನರು ಬೇರೆಯವರಿಗೆ ಬೆಲೆಕೊಡುವುದನ್ನೇ ಮರೆತ್ತಿದ್ದಾರೆ, ಅದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ.

ಒಮ್ಮೆ ಒಬ್ಬ ಮಹಿಳೆ ದೆಹಲಿಯಿಂದ ಬೆಂಗಳೂರಿಗೆ ವಿಮಾನದ ಟಿಕೆಟ್ ಕಾಯ್ಧಿರಿಸಿದಳು, ಕೊನೆ ಕ್ಷಣದಲ್ಲಿ ಟಿಕೆಟ್ ಕಾಯ್ಧಿರಿಸಿದ ಕಾರಣ ಬಹುಷಃ ಅವರಿಗೆ ತಮಗಿಷ್ಟದ ಟಿಕೆಟ್ ಸಿಗಲಿಲ್ಲ. ಕೊನೆಗೆ ವಿಮಾನ ಹತ್ತಿದರು. ಒಬ್ಬ ವಯಸ್ಸಾದ ವ್ಯಕ್ತಿ ಅವರ ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ.

ವಿಮಾನ ಟೇಕ್ ಆಫ್ ಆದ ಕೆಲ ನಿಮಿಷಗಳ ನಂತರ ಆ ಮಹಿಳೆ ವಿಮಾನ ಸಿಬ್ಬಂಧಿಯನ್ನು ಕರೆದು, ನಾನು ಇಂತಹ ವ್ಯಕ್ತಿಯ ಪಕ್ಕ ಕುಳಿತು ಪ್ರಯಾಣಿಸಲಾರೆ, ನನ್ನ ಗೌರವ ಕಡಿಮೆಯಾಗುತ್ತದೆ ಎಂದರು. ಈ ಮಾತನ್ನು ಕೇಳಿದ ವಿಮಾನ ಸಿಬ್ಬಂಧಿ ಮೇಡಂ ವಿಮಾನದಲ್ಲಿ ಎಕಾನಮಿ ಕ್ಲಾಸಿನ ಬೇರೆ ಯಾವುದೇ ಸೀಟು ಲಭ್ಯವಿಲ್ಲ ಎಂದಳು, ಆದರೆ ಆ ಮಹಿಳೆ ಕೇಳಲಿಲ್ಲ, ನಂತರ ಸಿಬ್ಬಂಧಿಯು ಕ್ಯಾಪ್ಟನ್ ಅವರ ಬಳಿ ವಿಚಾರಿಸಿ ಹೇಳುತ್ತೇನೆ ಎಂದರು.

ಕೆಲ ನಿಮಿಷಗಳ ನಂತರ ವಿಮಾನದ ಕ್ಯಾಪ್ಟನ್ ಬಂದು ಆ ಮಹಿಳೆಗೆ ಹೇಳಿದರು ಮೇಡಂ ಎಕಾನಮಿ ಮತ್ತು ಬ್ಯುಸಿನೆಸ್ ಕ್ಲಾಸಿನಲ್ಲಿ ಯಾವುದೇ ಸೀಟು ಲಭ್ಯವಿಲ್ಲ ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ ಒಂದು ಸೀಟು ಲಭ್ಯವಿದೆ ಅದನ್ನು ನೀಡುತ್ತೇವೆ ಹೀಗೆ ಬನ್ನಿ ಎಂದು ಆ ಮಹಿಳೆಯ ಪಕ್ಕದಲ್ಲಿನ ವ್ಯಕ್ತಿಯನ್ನು ಕೈಹಿಡಿದುಕೊಂಡು ಮುಂದೆ ಸಾಗಿದರು.

ಕ್ಯಾಪ್ಟನ್ ಅವರ ಆ ನಡೆಯನ್ನು ನೋಡಿ ಆ ಮಹಿಳೆ ಮತ್ತು ವಿಮಾನದಲ್ಲಿರುವ ಇತರೆ ಪ್ರಯಾಣಿಕರು ಅಚ್ಚರಿಯಾದರು, ಏನಿದು ಎಂದು ಆ ಮಹಿಳೆ ಪ್ರಶ್ನಿಸಿದಳು. ಆಗ, ಕ್ಯಾಪ್ಟನ್ ಹೇಳಿದರು, ನೀವು ಈ ವ್ಯಕ್ತಿಯ ಪಕ್ಕದಲ್ಲಿ ಕುಳಿತು ಪ್ರಯಾಣಿಸಲು ಯೋಗ್ಯರಲ್ಲ ಇವರಿಗೆ ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ ಒಂದು ಸೀಟು ನೀಡುತ್ತಿದ್ದೇವೆ ಇವರು ಕೆಲ ವರ್ಷಗಳ ಹಿಂದೆ ಮಿಲಿಟರಿಯಲ್ಲಿ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಶತ್ರುಗಳು ನಡೆಸಿದ ಗುಂಡಿನ ದಾಳಿಗೆ ಪ್ರತಿ ದಾಳಿ ಮಾಡುವಾಗ ಕಾಲಿನಲ್ಲಿ ಗುಂಡು ತಗುಲಿ ನಿವೃತ್ತರಾಗಿದ್ದರು, ಈಗ ಅವರಿಗೆ ನಡೆಯಲು ತೊಂದರೆಯಾಗುತ್ತಿದೆ, ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಡಿದ ಯೋಧನಿಗೆ ನಾವು ಎಕ್ಸಿಕ್ಯೂಟಿವ್ ಕ್ಲಾಸಿನ ಸೀಟಿನಲ್ಲಿ ಪ್ರಯಾಣ ಮಾಡುವ ಸೌಲಭ್ಯ ನೀಡುತ್ತಿದ್ದೇವೆ ಏಕೆಂದರೆ ಅವರು ನಿಮ್ಮಂತವರ ಪಕ್ಕದಲ್ಲಿ ಕುಳಿತು ಪ್ರಯಾಣಿಸಲು ಯೋಗ್ಯರಲ್ಲ ಅವರೊಬ್ಬ VIP ಎಂದರು, ಕ್ಯಾಪ್ಟನ್ ಮಾತು ಕೇಳಿದ ಎಲ್ಲಾ ಪ್ರಯಾಣಿಕರು ಚಪ್ಪಾಳೆ ತಟ್ಟಿದರು, ಆದರೆ ಆ ಮಹಿಳೆ ಪಶ್ಚಾತಾಪದಿಂದ ಕಣ್ಣೀರಿಟ್ಟಳು ನಂತರ ತಾನು ಮಾಡಿದ ತಪ್ಪಿನ ಬಗ್ಗೆ ಆ ಯೋಧನ ಬಳಿ ಕ್ಷಮೆಯಾಚಿಸಿದಳು.

For more Stories follow Karunadu Today

Click here to Join Our Whatsapp Group