ಈ ಜಗತ್ತಿನಲ್ಲಿ ಅವನಿಗೆ ಅಂತ ಯಾರೂ ಇಲ್ಲವೆಂದು ಪ್ರತಿ ದಿನ ಅಳುತ್ತಿದ್ದ. ಶಾಲೆಯಲ್ಲಿ ಯಾರ ಜೊತೆಯೂ ಸೇರಲು ಅವನಿಗೆ ಮನಸ್ಸು ಬರುತ್ತಿರಲಿಲ್ಲ. ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಯಾವಾಗಲೂ ಮಲಗುತ್ತಿದ್ದ. ಅದೊಂದು ದಿನ ಶಾಂತಿ ಟೀಚರ್ ಅವನು ಮಲಗಿದ್ದನ್ನು ಗಮನಿಸಿ ಅವನ ಬಳಿ ಹೋಗಿ ಎದ್ದೇಳಿಸಿ ಬಾಯಿಗೆ ಬಂದ ಹಾಗೆ ಬೈದಾಡಿದ್ದರು. ಆದರೂ ಮತ್ತೆ ಮಲಗತೊಡಗಿದ. ಅವನ ಈ ಅಭ್ಯಾಸವನ್ನು ಗಮನಿಸಿ ಒಂದು ದಿನ ಶಾಂತಿ ಟೀಚರ್ ಅವನನ್ನು ಶಾಲೆಯ ಮುಖ್ಯೋಪಾದ್ಯಯರ ಬಳಿ ಕರೆದುಕೊಂಡು ಹೋದರು ಹಾಗೂ ಮಲಗುವ ಅಭ್ಯಾಸವನ್ನು ಅವರ ಬಳಿ ಹೇಳಿದರು.

ಇದನ್ನು ಕೇಳಿ ಮುಖ್ಯೋಪಾದ್ಯರು ಅವನನ್ನು ಬಯ್ಯದೆ ಮುದ್ದು ಮಾಡಿ ನೀನು ಹೊರಗಡೆ ಹೋಗಿ ಆಟ ಆಡಿಕೋ ಎಂದು ಹೇಳಿದರು. ಇದನ್ನು ಕೇಳಿ ಶಾಂತಿ ಟೀಚರ್ ಆಶ್ಚರ್ಯದಿಂದ ಇದೇನಿದು ನೀವು ಅವನಿಗೆ ಬಯ್ಯಲೇ ಇಲ್ಲ ಎಂದು ಕೇಳಿದರು. ಅದಕ್ಕೆ ಮುಖ್ಯೋಪಾದ್ಯರು ಆ ಹುಡುಗನು ನಮ್ಮ ಶಾಲೆಯಲ್ಲೇ ಅತಿ ಬುದ್ದಿವಂತ ಹುಡುಗನು. ಅವನು ಎಲ್ಲಾ ವಿಷಯದಲ್ಲೂ ತುಂಬಾ ಜಾಣನಿದ್ದಾನೆ ಎಂದು ಹೇಳಿದರು. ಇದನ್ನು ಕೇಳಿ ಶಾಂತಿ ಟೀಚರ್ ಆಶ್ಚರ್ಯಪಟ್ಟರು. ನಂತರ ಆ ಹುಡುಗನು ಯಾಕೆ ಪ್ರತಿ ದಿನ ತರಗತಿಯಲ್ಲಿ ಮಲಗುತ್ತಾನೆ ಎಂದು ತಿಳಿಯುವ ಕುತೂಹಲ ಪ್ರಾರಂಭವಾಯಿತು. ಮಾರನೆಯ ದಿನ ಆ ಹುಡುಗನನ್ನು ಕರೆದು ಅವನ ಬಗ್ಗೆ ಎಲ್ಲಾ ತಿಳಿದುಕೊಂಡರು. ನಂತರ ಆ ಹುಡುಗನು ಒಬ್ಬ ಅನಾಥನೆಂದು ತಿಳಿದು ಅವನಿಗೆ ತರಗತಿಯಲ್ಲಿ ಹೆಚ್ಚಿನ ಪ್ರೀತಿ ತೋರಿಸಿ ಚೆನ್ನಾಗಿ ಓದಿಸಿದರು.

ಆ ಹುಡುಗನು ಶಾಲೆಯನ್ನು ಮುಗಿಸಿ ನಂತರ ಒಳ್ಳೆಯ ಕಾಲೇಜಿನಲ್ಲಿ ವಿಧ್ಯಾಬ್ಯಾಸ ಮಾಡುತ್ತಾನೆ. ಅಪ್ಪ ಅಮ್ಮ ಇಲ್ಲವೆಂದು ಮಾನಸಿಕವಾಗಿ ಕುಗ್ಗಿದ್ದ ಆ ಹುಡುಗನಿಗೆ ಧೈರ್ಯ ತುಂಬಿ ಕಾಲೇಜಿನ ಮೆಟ್ಟಿಲು ಹತ್ತುವವರೆಗು ಅವನಿಗೆ ಸಹಾಯ ಮಾಡಿದ್ದರು. ವರುಷಗಳೇ ಕಳೆದವು. ಶಾಂತಿ ಟೀಚರ್ ಗೆ ಕೂಡ ವಯಸ್ಸಾಯಿತು. ವಯಸ್ಸಾಯಿತು ಅನ್ನುವ ಕಾರಣಕ್ಕೆ ಶಾಂತಿ ಟೀಚರ್ ನ ಮಗನು ಅವರನ್ನು ವೃದ್ದಾಶ್ರಮಕ್ಕೆ ಸೇರಿಸಲು ಅದೊಂದು ದಿನ ಕರೆದು ಕೊಂಡು ಹೋದ. ಪ್ರೀತಿಯಿಂದ ಸಾಕಿದ ಮಗನು ಇಂದು ನನ್ನನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆದುಕೊಂಡು ಹೋಗುತ್ತಿದ್ದಾನೆ ಎಂದು ತಿಳಿದ ಶಾಂತಿ ಟೀಚರ್ ಕಣ್ಣಲ್ಲಿ ನೀರು ಬಂದಿತು. ಅದೇ ಸಮಯದಲ್ಲಿ ವೃದ್ದಾಶ್ರಮದಲ್ಲಿ ಇರುವ ಎಲ್ಲಾ ವೃದ್ದರಿಗೆ ಊಟ ಹಂಚಲೆಂದು ಬಂದಿದ್ದ ಆ ಹುಡುಗನು ಶಾಂತಿ ಟೀಚರ್ ಅನ್ನು ಕಂಡು ಒಂದು ಕ್ಷಣ ಅಚ್ಚರಿ ಪಟ್ಟನು. ಆಗ ಅವರ ಬಳಿ ಹೋದಾಗ ಅವರು ಅವನ ಮಗನ ಜೊತೆ ಅಲ್ಲಿಗೆ ಬಂದಿರುವ ವಿಷಯ ತಿಳಿದು ಅವನ ಕಣ್ಣಲಿ ನೀರು ಬರುತ್ತದೆ.

ಆಗ ಆ ಹುಡುಗನು ಶಾಂತಿ ಟೀಚರ್ ಮಗನ ಬಳಿ ಹೋಗಿ “ನಿಮಗೆ ದೇವರು ತಾಯಿಯನ್ನು ಕೊಟ್ಟಿದ್ದಾನೆ ಆದರೆ ಅವರನ್ನು ಬೇಡವೆಂದು ತಿರಸ್ಕರಿಸಿ ಆಶ್ರಮಕ್ಕೆ ಸೇರಿಸಲು ಬಂದಿದ್ದೀರ ಆದರೆ ನನಗೆ ತಾಯಿ ಇಲ್ಲ, ಆಶ್ರಮದಲ್ಲಿ ಇರುವ ಎಲ್ಲಾ ತಾಯಂದಿರನ್ನೇ ನನ್ನ ತಾಯಿ ಎಂದು ತಿಳಿದು ಬದುಕುತ್ತಿರುವೆ, ಶಾಂತಿ ಟೀಚರ್ ನನಗೆ ಬರೀ ತಾಯಿಯಷ್ಟೇ ಅಲ್ಲ ನನಗೆ ವಿಧ್ಯೆ ಹೇಳಿಕೊಟ್ಟ ಗುರು ಮತ್ತು ಜೀವನದಲ್ಲಿ ಕುಗ್ಗಿಹೋಗಿದ್ದ ನನಗೆ ಧೈರ್ಯ ತುಂಬಿ ಜೀವನದಲ್ಲಿ ಗೆಲ್ಲುವ ಹಾಗೆ ಮಾಡಿದ ದೇವರು, ಅವರನ್ನು ಇಂದು ನೀವು ವೃದ್ದಾಶ್ರಮಕ್ಕೆ ಸೇರಿಸಲು ಬಂದಿದ್ದೀರ. ಅವರನ್ನು ಸಾಕಲು ನಿಮಗೆ ಕಷ್ಟವಾದರೆ ನಾನು ಅವರನ್ನು ನೋಡಿಕೊಳ್ಳುತ್ತೇನೆ” ಎಂದನು.

ಇದನ್ನು ಕೇಳಿದ ಶಾಂತಿ ಟೀಚರ್ ಕಣ್ಣಲ್ಲಿ ನೀರು ಬಂದಿತ್ತು. ನಂತರ ಆ ಹುಡುಗನು ಶಾಂತಿ ಟೀಚರ್ ರನ್ನು ತಾನು ಇದ್ದ ಮನೆಗೆ ಕರೆದುಕೊಂಡು ಹೋಗುತ್ತಾನೆ. ವಿಶಾಲವಾದ ಮನೆಯನ್ನು ಕಂಡು ಶಾಂತಿ ಟೀಚರ್ ಮನೆಯ ಒಳ ಬರಲು ಒಂದು ಕ್ಷಣ ಹೆದರುತ್ತಾರೆ. ನಂತರ ಆ ಹುಡುಗನು ಅವರನ್ನು ನಿಧಾನವಾಗಿ ಒಳಗಡೆ ಕರೆದುಕೊಂಡು ಬಂದು ಇದು ನೀವು ನೀಡಿದ ಭಿಕ್ಷೆ. ಅಂದು ನೀವು ನನಗೆ ಧೈರ್ಯ ನೀಡದಿದ್ದಿದ್ದರೆ ಇಂದು ನಾನು ಇಷ್ಟೊಂದು ದೊಡ್ಡ ವ್ಯಕ್ತಿ ಆಗಲು ಸಾಧ್ಯವಾಗುತ್ತಿರಲಿಲ್ಲ ಇನ್ನು ಮುಂದೆ ನೀವು ಇಲ್ಲೇ ವಾಸಿಸುತ್ತೀರ, ನನ್ನ ಹೆಂಡತಿ ಮತ್ತು ಮಕ್ಕಳು ನಿಮ್ಮನ್ನು ಸ್ವಂತ ತಾಯಿಯ ತರಹ ನೋಡಿಕೊಳ್ಳುತ್ತಾರೆ ಎನ್ನಲು ಶಾಂತಿ ಟೀಚರ್ ತುಂಬಾ ಖುಷಿ ಪಟ್ಟರು.ಅದಕ್ಕೆ ಹೇಳುವುದು ಗುರುಗಳು ದೇವರಿಗೆ ಸಮಾನವೆಂದು.

ಗುರುಗಳು ಪಾಠ ಹೇಳಿಕೊಟ್ಟ ಎಲ್ಲಾ ಮಕ್ಕಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಆದರೆ ಪಾಠ ಹೇಳಿಸಿಕೊಂಡ ಎಲ್ಲಾ ಮಕ್ಕಳು ಗುರುಗಳನ್ನು ಯಾವತ್ತೂ ಮರೆಯುವುದಿಲ್ಲ. ಒಂದು ಬಾರಿಯಾದರು ನಿಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ಭೇಟಿಯಾಗಿ.

For more Stories follow Karunadu Today

Click here to Join Our Whatsapp Group