ನಾಯಿ, ಬೆಕ್ಕುಗಳೆಂದರೆ ಮನುಷ್ಯರಿಗೆ ಅಚ್ಚು ಮೆಚ್ಚಿನ ಪ್ರಾಣಿಗಳೆಂದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವೆ.ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕುವ ಆಸೆ ಅದೆಷ್ಟೋ ಜನರಿಗೆ ಇರುತ್ತದೆ. ನಾವು ಹೇಳುವ ಹಾಗೆ ಮಾತು ಕೇಳುವ ಈ ಪ್ರಾಣಿಗಳ ಜೊತೆಗೆ ಆಟವಾಡುತ್ತ ಕಾಲ ಕಳೆಯುವ ಆ ಕ್ಷಣಗಳ ಆನಂದವೇ ಬೇರೆ.ಇವುಗಳಷ್ಟೇ ಅಲ್ಲದೆ ಹಸು, ಜಿಂಕೆಯಂತಹ ಪ್ರಾಣಿಗಳನ್ನು ಕೂಡ ಮನುಷ್ಯರು ಸಾಕುತ್ತಾರೆ. ಒಟ್ಟಿನಲ್ಲಿ ಮನುಷ್ಯರಿಗೆ ಮಾರಕವಾಗದಂತ ಪ್ರಾಣಿಗಳನ್ನು ಸಾಕುವುದನ್ನು ನಾವೆಲ್ಲರು ನೋಡಿದ್ದೇವೆ. ಆದರೆ ಪ್ರಪಂಚದಲ್ಲಿ ಕೆಲವು ವ್ಯಕ್ತಿಗಳಿದ್ದಾರೆ. ಮನುಷ್ಯರ ಪ್ರಾಣದ ಜೊತೆಗೆ ಆಟವಾಡುವಂತಹ ಪ್ರಾಣಿಗಳನ್ನು ಅವರು ಸಾಕಿದ್ದು ಆ ಪ್ರಾಣಿಗಳ ಬಗ್ಗೆ ನೀವು ಕೇಳಿದರೆ ಖಂಡಿತ ಅಚ್ಚರಿ ಪಡುತ್ತೀರ. ಬನ್ನಿ ನಿಮಗೆ ಇಂದು ಆ ಭಯಂಕರ ಪ್ರಾಣಿಗಳು ಮತ್ತು ಅದನ್ನು ಸಾಕಿರುವ ಮಾಲೀಕರ ಬಗ್ಗೆ ತಿಳಿಸಿಕೊಡುತ್ತೇವೆ.

1) ರಾಂಬೊ ಅಲ್ಲಿಗೇಟಾರ್ – Rambo Alligator

ಅಮೇರಿಕಾದ ಫ್ಲೋರಿಡಾದ “ಲೇಕ್ಲ್ಯಾಂಡ್”ನಲ್ಲಿ ಇರುವ “ಮೇರಿ ತಾರ್ನ್” ಎನ್ನುವ ಮಹಿಳೆಯು ಕಳೆದ 10 ವರ್ಷಗಳಿಂದ ಒಂದು “ಮೊಸಳೆಯನ್ನು” ಸಾಕಿದ್ದಾಳೆ. ಒಂದು ದಿನ ನದಿಯ ದಂಡೆಯ ಮೇಲೆ ಗಾಯದಿಂದ ಒದ್ದಾಡುತ್ತಿದ್ದ ಈ ಮೊಸಳೆಯನ್ನು ತಂದು ಸಾಕಿದ್ದ ಮೇರಿ ಕಳೆದ 10ವರ್ಷದಿಂದ ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾಳೆ. ಮನುಷ್ಯರಿಗೆ ಸ್ವಲ್ಪವು ಕೂಡ ತೊಂದರೆ ಕೊಡದೆ ಎಲ್ಲರ ಜೊತೆ ಬೆರೆಯುವ ಈ ಮೊಸಳೆಗೆ ಬಿನ್ನ ಬಿನ್ನವಾದ ಬಟ್ಟೆ ತೊಡಿಸಿ ಅದನ್ನು ಬರುವ ಜನರ ಜೊತೆಗೆ ಬೆರೆಯುವ ಹಾಗೆ ಮೇರಿ ತರಬೇತಿ ನೀಡಿದ್ದಾಳೆ.

2) ಗೋಲ್ಡಿ ದಿ ಗೋಲ್ಡ್ ಫಿಷ್ – Goldie the Goldfish

“ಅಡ ಷಾ” ಎನ್ನುವ ಬ್ರಿಟನ್ ದೇಶದ ಮಹಿಳೆಯು 15 ವರ್ಷಗಳ ಹಿಂದೆ ಒಂದು ಪುಟ್ಟ “ಗೋಲ್ಡ್ ಮೀನನ್ನು” ಮಾರುಕಟ್ಟೆಯಲ್ಲಿ ಖರೀದಿಸಿ ತಂದಿದ್ದಳು. ಸಹಜವಾಗಿ “ಗೋಲ್ಡ್ ಫಿಶ್” ಗಳು 10 ವರ್ಷಗಳ ಕಾಲ ಮಾತ್ರ ಬದುಕುತ್ತವೆ. ಆದರೆ ಈ ಮೀನು 15 ವರ್ಷಗಳಾದರೂ ಬದುಕಿದೆ. ಇದಕ್ಕೆ ಕಾರಣ ಈ ಮಹಿಳೆ ನೋಡಿಕೊಳ್ಳುತ್ತಿರುವ ರೀತಿ. ಸೂರ್ಯನ ಶಾಖ ಹೆಚ್ಚು ಬೀಳದೆ ಸರಿಯಾದ ಸಮಯಕ್ಕೆ ಇದಕ್ಕೆ ಆಹಾರ ನೀಡುತ್ತ ಇರುವುದರಿಂದ ಇಂದು ಇದರ ತೂಕ 1ಕೆಜಿ ವರೆಗೂ ಆಗಿದೆ. ಇದು ಬ್ರಿಟನ್ ದೇಶದಲ್ಲಿಯೇ ಅತ್ಯಂತ ದೊಡ್ಡ “ಗೋಲ್ಡ್ ಫಿಶ್” ಎಂದು ಹೆಸರು ಪಡೆದಿದೆ.

3) ಕೇಮ್ಯಾನ್ – Caiman

ಜಪಾನ್ ದೇಶದ ಕುರೆ ನಗರದ“Nobumitsu Murabayashi” ಎನ್ನುವ 65 ವರ್ಷದ ವ್ಯಕ್ತಿಯು ಕಳೆದ 34 ವರ್ಷಗಳಿಂದ “ಕೇಮ್ಯಾನ್(ಮೊಸಳೆ ಜಾತಿಗೆ ಸೇರಿದ ಪ್ರಾಣಿ)” ಸಾಕುತ್ತಿದ್ದಾನೆ. ತಾನು ಚಿಕ್ಕವನಿದ್ದಾಗ ಈತನ ಕೈಗೆ ಈ ಪ್ರಾಣಿಯು ಸಿಕ್ಕಿತ್ತು. ಅಂದಿನಿಂದ ಇದನ್ನು ಜೋಪಾನವಾಗಿ ನೋಡಿಕೊಳ್ಳುತ್ತಿರುವ ಇವರು ಇದರ ಸಂಪೂರ್ಣ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲಿನ ಸರ್ಕಾರ ಕೂಡ ಇವರಿಗೆ ಸಾಕಲು ಅಪ್ಪಣೆ ನೀಡಿದ್ದು ಎಲ್ಲಿಗೆ ಹೋದರು ಕೂಡ ಜೊತೆಯಲ್ಲಿಯೇ ಇದನ್ನು ಕರೆದುಕೊಂಡು ಹೋಗುತ್ತಾರೆ.

4) ಆಟು ರಿಯಿಂಡೀರ್ – Aatu Reindeer

ಕ್ರಿಸ್ಮಸ್ ಹಬ್ಬ ಬಂದರೆ ಸಾಕು ಸಂತಾಕ್ಲಾಸ್ ನಾವು ಕೇಳಿದ ಉಡುಗೊರೆ ಹೊತ್ತು ಸಾರಂಗ ಜಾತಿಯ ರಿಯಿಂಡೀರ್ ಪ್ರಾಣಿಗಳ ಮೇಲೆ ಬರುವ ಕಥೆಯನ್ನು ನಾವೆಲ್ಲರು ಕೇಳಿದ್ದೇವೆ. ಆದರೆ ಈ ರಿಯಿಂಡೀರ್ ಪ್ರಾಣಿಗಳು ಅಷ್ಟೊಂದು ಸ್ನೇಹ ಜೀವಿಗಳಲ್ಲ. ಇವುಗಳ ಹತ್ತಿರ ಹೋದರೆ ಸಾಕು ಕೊಂಬಿನಿಂದ ತಿವಿದು ಸಾಯಿಸಿಬಿಡುತ್ತವೆ. ಆದರೆ ಫಿನ್ಲ್ಯಾಂಡ್ ದೇಶದ ಒಬ್ಬ ಮಹಿಳೆಯು ಈ ರಿಯಿಂಡೀರ್ ಪ್ರಾಣಿಯನ್ನು ಸಾಕಿದ್ದಾಳೆ. ಕಾಡಿನಲ್ಲಿ ವಾಯುವಿಹಾರಕ್ಕೆ ಹೋಗಿದ್ದ ವೇಳೆ ತನ್ನ ಕೈಗೆ ಸಿಕ್ಕ ಈ ಪ್ರಾಣಿಯನ್ನು ತಂದು ಮನೆಯಲ್ಲಿ ಸಾಕುತ್ತಿರುವ ಈ ಮಹಿಳೆಗೆ ಇದುವರೆಗೂ ಈ ಪ್ರಾಣಿಯು ಯಾವುದೇ ತೊಂದರೆ ನೀಡಿಲ್ಲ.

ಇದೇ ತರಹ ಸಿಂಹ, ಹುಲಿ, ಚಿರತೆ, ಹಾವು ಹೀಗೆ ಅನೇಕ ಪ್ರಾಣಿಗಳನ್ನು ಜಗತ್ತಿನ ಕೆಲವು ಜನರು ಸಾಕುತ್ತಿದ್ದಾರೆ. ತಿನ್ನಲು ಆಹಾರ ಹಾಗು ಪ್ರೀತಿ ನೀಡಿದರೆ ಸಾಕು ಎಂತಹ ಪ್ರಾಣಿಗಳನ್ನು ಬೇಕಾದರು ಮನುಷ್ಯನು ಸಾಕಬಹುದು ಎಂದು ಈ ವ್ಯಕ್ತಿಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಹಾಗಂತ ಎಲ್ಲರು ಸಾಕಲು ಸಾದ್ಯವಿಲ್ಲ. ಕೆಲವು ಜನರು ಇದೇ ತರಹ ಕ್ರೂರ ಪ್ರಾಣಿಗಳನ್ನು ಸಾಕಲು ಹೋಗಿ ಕೊನೆಗೆ ಅವುಗಳ ಬಾಯಿಗೆ ಆಹಾರವಾದ ಘಟನೆಗಳು ಕೂಡ ನಡೆದಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ

Follow Karunadu Today for more Interesting Facts & Stories. 

Click here to Join Our Whatsapp Group