
ಒಮ್ಮೆ ತಲೆಯೆತ್ತಿ ಆಕಾಶದ ಯಾವ ಮೂಲೆಯಲ್ಲಿ ನೋಡಿದರೂ ಕೂಡ ಕೇವಲ ನಕ್ಷತ್ರ, ಗ್ರಹ ಮತ್ತು ಆಕಾಶಗಂಗೆಗಳೆ ಕಾಣುತ್ತವೆ. ಅವುಗಳನ್ನು ನೋಡುತ್ತಿದ್ದರೆ ನಮ್ಮ ಸಂಪೂರ್ಣ ಬ್ರಹ್ಮಾಂಡ ಅದೆಷ್ಟು ವಿಶಾಲವಾಗಿದೆ ಎಂದೆನಿಸುತ್ತದೆ. ಇದುವರೆಗು ನೀವುಗಳು ಭೂಮಿಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಆ ಗ್ರಹವಿದೆ, ಈ ನಕ್ಷತ್ರವಿದೆ ಮತ್ತು ಆಕಾಶಗಂಗೆಯಿದೆ ಎಂದು ಕೇಳಿದ್ದೀರಿ, ಆದರೆ ಇಂದು ನಾನು ನಿಮಗೆ ಹೇಳಲು ಹೊರಟಿರುವ ವಿಷಯವನ್ನು ಕೇಳಿ ನಮ್ಮ ಬ್ರಹ್ಮಾಂಡದಲ್ಲಿ ಇಂತಹ ಸ್ಥಳವು ಕೂಡ ಇದೆಯೇ ಎಂದು ಆಶ್ಚರ್ಯ ಪಡುತ್ತೀರಿ. ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ಆ ಸ್ಥಳದಲ್ಲಿ ಏಲಿಯನ್ಸ್ ಗಳಿದ್ದಾರಂತೆ. ಬನ್ನಿ ಆ ರಹಸ್ಯಮಯ ಸ್ಥಳದ ಕುರಿತು ತಿಳಿದುಕೊಳ್ಳೋಣ.
ನೀವು ಒಂದು “ಸ್ಪೇಸ್ ಶಿಪ್” ನಲ್ಲಿ ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡುತ್ತಾ ಹೋಗುತ್ತಿದ್ದೀರಿ ಎಂದು ಭಾವಿಸಿ. ಎಲ್ಲಿ ನೋಡಿದರೂ ಕೂಡ ಅನೇಕ ನಕ್ಷತ್ರಗಳು ನಿಮಗೆ ಕಾಣುತ್ತಿರುತ್ತವೆ. ಆದರೆ ನೋಡ ನೋಡುತ್ತಿದ್ದಂತೆ ಒಮ್ಮೆಲೇ ಒಂದು ಸ್ಥಳದ ಒಳಗೆ ನೀವು ಹೋಗುತ್ತೀರಿ. ಆ ಸ್ಥಳವು ಸಂಪೂರ್ಣವಾಗಿ ಕತ್ತಲಿನಿಂದ ಆವರಿಸುತ್ತದೆ. ಅದೆಷ್ಟು ಕತ್ತಲು ಅಲ್ಲಿ ಇರುತ್ತದೆಯೆಂದರೆ ನಿಮಗೆ ಎಲ್ಲಿ ಹೋಗುತ್ತಿದ್ದೀರಿ ಎಂದು ತಿಳಿಯುವುದೇ ಇಲ್ಲ. ಆಗ ನಿಮಗೆ ಹೇಗಾಗಬಹುದು?. ಎಂತವರಿಗಾದರೂ ಭಯವಾಗುತ್ತದೆ ಅಲ್ಲವೆ?. ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ ಬಾಹ್ಯಾಕಾಶದಲ್ಲಿ ಇಂತಹ ಸ್ಥಳಗಳು ಇವೆ. ಆ ಸ್ಥಳವು ಸಂಪೂರ್ಣ ಕತ್ತಲಿನಿಂದ ಆವರಿಸಿದ್ದು ಅದರ ಒಳಗಿಂದ ಸ್ವಲ್ಪವೂ ಬೆಳಕು ಹೊರ ಬರುತ್ತಿಲ್ಲ. ಅಂತಹ ಸ್ಥಳಗಳನ್ನು “ವಾಯಿಡ್ಸ್(VOIDS)” ಎಂದು ಕರೆಯುತ್ತಾರೆ. ಈ “ವಾಯಿಡ್ಸ್(VOIDS)” ಗಳು ಏನೆಂದು ನಿಮಗೆ ಸುಲಭವಾಗಿ ಹೇಳುವುದಾದರೆ ಒಂದು “ಸ್ಪಾಂಜ್” ಅನ್ನು ನೀವು ಗಮನಿಸಿದರೆ ಅದರ ಒಳಗೆ ಚಿಕ್ಕ ಚಿಕ್ಕ ರಂದ್ರಗಳನ್ನು ನೀವು ಕಾಣಬಹುದು. ಅದೇ ತರಹ ನಮ್ಮ ಬ್ರಹ್ಮಾಂಡದಲ್ಲಿಯೂ ಕೂಡ ರಂದ್ರಗಳಿದ್ದು ಅಲ್ಲಿ ಸಂಪೂರ್ಣವಾಗಿ ಕತ್ತಲಿನಿಂದ ಆವರಿಸಿದೆ. ಅಲ್ಲಿ ಯಾವುದೇ ಆಕಾಶಗಂಗೆಗಳು ಇರುವುದಿಲ್ಲ, ಅಕಸ್ಮಾತ್ ಇದ್ದರೂ ಕೂಡ ತುಂಬಾ ಕಡಿಮೆ ಸಂಖ್ಯೆಯಲ್ಲಿ ಇರುತ್ತವೆ. ಇಂತಹ ಸ್ಥಳಗಳಿಗೆ “ವಾಯಿಡ್ಸ್(VOIDS)” ಎಂದು ಕರೆಯುತ್ತಾರೆ.
ಇದನ್ನು ನೀವು ಇನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಇಲ್ಲಿ ತೋರಿಸಿರುವ ಫೋಟೋವನ್ನು ಸರಿಯಾಗಿ ಗಮನಿಸಿ. ಈ ಫೋಟೋದಲ್ಲಿ ನಿಮಗೆ ಕಾಣುತ್ತಿರುವುದು ಸಂಪೂರ್ಣ ಬ್ರಹ್ಮಾಂಡದ “ಘನ ವಿಭಾಗ (ಕ್ಯೂಬಿಕ್ ಸೆಕ್ಷನ್”). ಇದರಲ್ಲಿ ನೀಲಿ ಬಣ್ಣದಲ್ಲಿ ಕಾಣುತ್ತಿರುವುದನ್ನು “ಮ್ಯಾಟರ್” ಎಂದು ಕರೆಯುತ್ತಾರೆ ಮತ್ತು ಅವುಗಳ ಮಧ್ಯ ಭಾಗದಲ್ಲಿ ಇರುವ ಖಾಲಿ ಜಾಗವನ್ನು “ವಾಯಿಡ್ಸ್(VOIDS)” ಎಂದು ಕರೆಯುತ್ತಾರೆ. ನಮ್ಮ ಸಂಪೂರ್ಣ ಬ್ರಹ್ಮಾಂಡದಲ್ಲಿ ಇದೇ ರೀತಿ ಅನೇಕ “ವಾಯಿಡ್ಸ್(VOIDS)” ಗಳಿವೆ. ಆದರೆ ಅದೊಂದು ದಿನ ಪತ್ತೆ ಮಾಡಲಾದ ಇಂತಹ ಒಂದು “ವಾಯಿಡ್ಸ್(VOIDS)” ವಿಜ್ಞಾನಿಗಳಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಏಕೆಂದರೆ ಅದು ನಮ್ಮ ಸಂಪೂರ್ಣ ಬ್ರಹ್ಮಾಂಡದಲ್ಲಿ ಇರುವ ಅತ್ಯಂತ ದೊಡ್ಡ “ವಾಯಿಡ್ಸ್(VOIDS)” ಆಗಿದೆ. ವಿಜ್ಞಾನಿಗಳು ಹೇಳುವ ಪ್ರಕಾರ ಬೌತಶಶಾಸ್ತ್ರದ ನಿಯಮದ ಅನುಸಾರ ಅಷ್ಟೊಂದು ದೊಡ್ಡ “ವಾಯಿಡ್ಸ್(VOIDS)” ಇರಲೇಬಾರದು. ಆದರೆ ಅದು ಇರುವುದನ್ನು ಕಂಡು ಪ್ರಪಂಚದ ಅನೇಕ ವಿಜ್ಞಾನಿಗಳು ದಂಗಾಗಿದ್ದಾರೆ. ಬನ್ನಿ ಈಗ ಆ ಬೃಹತ್ “ವಾಯಿಡ್ಸ್(VOIDS)” ಕುರಿತು ತಿಳಿಸಿಕೊಳ್ಳೋಣ.
ಆ ಬೃಹತ್ “ವಾಯಿಡ್ಸ್(VOIDS)” ಇರುವುದು ಭೂಮಿಯಿಂದ 700 ಮಿಲಿಯನ್ ಜ್ಯೋತಿವರ್ಷಗಳಷ್ಟು ದೂರದಲ್ಲಿ ಇರುವ ಬೂಟಿಸ್ ನಕ್ಷತ್ರಪುಂಜದಲ್ಲಿ (Boötes constellation). ಇದನ್ನು “ಬೂಟಿಸ್ ವಾಯಿಡ್ಸ್ ಅಥವ ದಿ ಗ್ರೇಟ್ ವಾಯಿಡ್ಸ್” ಎಂದು ಕೂಡ ಕರೆಯುತ್ತಾರೆ. ಇದನ್ನು ಮೊಟ್ಟ ಮೊದಲ ಬಾರಿಗೆ “ರಾಬರ್ಟ್ ಪಿ. ಕಿರ್ಶ್ನರ್” ಮತ್ತವರ ತಂಡವು 1987 ರಲ್ಲಿ ಕಂಡು ಹಿಡಿದರು. ಅಂದಿನಿಂದ ಈ ಬೃಹತ್ “ವಾಯಿಡ್ಸ್(VOIDS)” ಒಳಗೆ ಆಕಾಶಗಂಗೆಗಳು ಇರುವವೇ ಎಂದು ಪತ್ತೆ ಮಾಡುತ್ತಲೆ ಇರುವ ವಿಜ್ಞಾನಿಗಳು ಇದುವರೆಗು ಅದರ ಒಳಗೆ ಕೇವಲ 60 ಆಕಾಶಗಂಗೆಗಳು ಇರುವುದನ್ನು ಮಾತ್ರ ಪತ್ತೆ ಮಾಡಿದ್ದು ಉಳಿದ ಸಂಪೂರ್ಣ ಜಾಗವು ಖಾಲಿಯಾಗಿದೆ. ಈ ಬೃಹತ್ “ವಾಯಿಡ್ಸ್(VOIDS)” ಕುರಿತು ಪ್ರಪಂಚದ ನಾನಾ ದೇಶದ ವಿಜ್ಞಾನಿಗಳು ಅನೇಕ ಸಂಶೋದನೆ ಮಾಡಿದ್ದು ಇಷ್ಟೊಂದು ಬೃಹತ್ ಆಕಾರದ “ವಾಯಿಡ್ಸ್(VOIDS)” ಅದು ಹೇಗೆ ರಚನೆಯಾಯಿತು ಎನ್ನುವುದು ಮಾತ್ರ ರಹಸ್ಯವಾಗಿಯೇ ಉಳಿದಿದೆ.
ಇನ್ನು ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ಈ “ಬೂಟಿಸ್ ವಾಯಿಡ್ಸ್ ಇಷ್ಟೊಂದು ದೊಡ್ಡದಾಗಿ ರಚನೆಯಾಗಲು ಕಾರಣ “coalescence” ಎನ್ನುವ ವಿಧಾನ. ಈ ವಿಧಾನವು ಹೇಳುವ ಪ್ರಕಾರ ನೀರಿನ ಗುಳ್ಳೆಗಳು ಒಂದಕ್ಕೊಂದು ಹತ್ತಿರ ಬಂದು ಮಿಶ್ರಣವಾದಾಗ ಆ ಗುಳ್ಳೆಯ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಇದೇ ತರಹ ಬ್ರಹ್ಮಾಂಡದಲ್ಲಿರುವ ಚಿಕ್ಕ ಚಿಕ್ಕ “ವಾಯಿಡ್ಸ್(VOIDS)”ಗಳು ಜೊತೆಗೂಡುತ್ತ ಇಷ್ಟೊಂದು ದೊಡ್ಡ “ವಾಯಿಡ್ಸ್(VOIDS)” ನಿರ್ಮಾಣವಾಗಿದೆಯಂತೆ. ಇದು ಮುಂಬರುವ ದಿನಗಳಲ್ಲಿ ಇನ್ನು ಕೂಡ ದೊಡ್ಡದಾಗಲಿದೆ ಎಂದು ಹೇಳಲಾಗುತ್ತಿದೆ.
ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ಇದರ ಒಳಗೆ “ಟೈಪ್ 3 ನಾಗರೀಕತೆಯ” ಜೀವಿಗಳು ವಾಸಿಸುತ್ತಿದ್ದು ಇದರ ಒಳಗಿರುವ ಅನೇಕ ಆಕಾಶಗಂಗೆಗಳನ್ನು ಆ ಜೀವಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರಂತೆ. ಅಲ್ಲಿರುವ ನಕ್ಷತ್ರಗಳಿಂದ ಹೊರ ಬರುತ್ತಿರುವ ಬೆಳಕನ್ನು ಬೃಹತ್ ಗಾತ್ರದ “ಡೈಸನ್ ಸ್ಫೀಯರ್” ತರಹದ ಯಂತ್ರ ಬಳಸಿ ಸಂಪೂರ್ಣವಾಗಿ ಹತೋಟಿಯಲ್ಲಿ ಇಟ್ಟುಕೊಂಡಿದ್ದಾರೆ ಆದ ಕಾರಣ ಅಲ್ಲಿಂದ ಬೆಳಕು ಹೊರ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ತರಹದ ಸರಿಯಾದ ಪುರಾವೆ ಸಿಕ್ಕಿಲ್ಲ. ಅದೇನೇ ಹೇಳಿ ಹುಡುಕುತ್ತಾ ಹೋದಂತೆಲ್ಲಾ ಅನೇಕ ರಹಸ್ಯಗಳು ಈ ನಮ್ಮ ಬ್ರಹ್ಮಾಂಡದಲ್ಲಿ ಸಿಗುತ್ತಲೇ ಇದ್ದು ಅವುಗಳನ್ನು ನೋಡುತ್ತಿದ್ದರೆ ಸಾಕಷ್ಟು ಆಶ್ಚರ್ಯವಾಗುತ್ತದೆ.
Follow Karunadu Today for more Interesting Facts & Stories.
Click here to Join Our Whatsapp Group