
"ಅಧ್ಯಾತ್ಮಿಕ ಮಾಹಿತಿ"
ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧ ನಡೆಯುವ ಸಮಯದಲ್ಲಿ ಕ್ಷೇತ್ರ ಪಾಲಕನಾದ ಶ್ರೀ ಕೃಷ್ಣ ಪರಮಾತ್ಮ ತನ್ನ ದಶಅವತಾರವನ್ನು ಪಾಂಡವರಲ್ಲಿ ಒಬ್ಬರಾದ ಬಿಲ್ಲು ವಿದ್ಯೆಯಲ್ಲಿ ಪ್ರವೀಣನಾದ ಅರ್ಜುನನಿಗೆ ದರ್ಶನ ಮಾಡಿಸುವನು. ಆಗ ಅರ್ಜುನ ಭಕ್ತಿಯಿಂದ ಕೃಷ್ಣನ ಕೃಪೆಗೆ ಪಾತ್ರನಾಗಿ ತನಗೆ ಕಾಡುವ ಪ್ರಶ್ನೆಗಳನ್ನು ಕೃಷ್ಣನಿಗೆ ಕೇಳುತ್ತಾನೆ. ಹೇ ಮಾಧವ ಹೆಚ್ಚು ಪೂಜೆ ಮಾಡುವ ಜನರು ಹೆಚ್ಚಾಗಿ ಕಷ್ಟಗಳನ್ನ ಅನುಭವಿಸುತ್ತಾರೆ ಇದರ ಹಿಂದಿರುವ ಕಾರಣವೇನು? ಎಂದು ಕೇಳಿದ.
ಈ ಪ್ರಶ್ನೆಗೆ ಶ್ರೀ ಕೃಷ್ಣ ಪರಮಾತ್ಮ ಬಹಳ ಗಂಭೀರವಾಗಿದೆ ನಿನ್ನ ಪ್ರಶ್ನೆ, ದೇವರನ್ನು ಪೂಜೆ ಮಾಡುವವರು ಮತ್ತು ಮಾಡದೇ ಇರುವವರು ಇಬ್ಬರೂ ವಿಭಿನ್ನ ಬದುಕುಗಳನ್ನ ನಡೆಸುತ್ತಿದ್ದಾರೆ ಈ ವಿಚಾರವನ್ನು ನಾನು ನಿನಗೆ ಒಂದು ಕಥೆಯ ಮೂಲಕ ಅರ್ಥ ಮಾಡಿಸುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಹೇಳುತ್ತಾನೆ.
ಗುರು ಮತ್ತು ಶಿಷ್ಯರ ಕಥೆ

ಒಂದೂರಿನಲ್ಲಿ ಒಬ್ಬ ಗುರುವಿಗೆ ಇಬ್ಬರು ಶಿಷ್ಯರು ಇದ್ದರು ಒಬ್ಬನು ದೇವರ ಆರಾಧನೆಯನ್ನೇ ತನ್ನ ಜೀವನವೆಂದು ತಿಳಿದಿದ್ದನು ಇನ್ನೊಬ್ಬನು ನಾಸ್ತಿಕನಾಗಿದ್ದರು ಆದರೆ ಅವರ ಜೀವನಶೈಲಿಯಲ್ಲಿ ವಿಭಿನ್ನತೆ ಇತ್ತು. ಒಬ್ಬ ಶಿಷ್ಯರು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಇನ್ನೊಬ್ಬನು ಆದರಿಂದ ದೂರವಾಗಿದ್ದನು.
ಒಂದು ದಿನ ನಾಸ್ತಿಕ ಶಿಷ್ಯರು ಕುಡಿದ ಮತ್ತಿನಲ್ಲಿ ಮಾತನಾಡುತ್ತಾ ಮನೆಗೆ ಹೋಗುತ್ತಿದ್ದರು, ಆ ಸಮಯದಲ್ಲಿ ಹೋಗುವ ದಾರಿಯಲ್ಲಿ ಹಣದಿಂದ ತುಂಬಿದ ಚೀಲವನ್ನು ಅವನಿಗೆ ಸಿಕ್ಕಿತು. ಇದರಿಂದ ಅವನಿಗೆ ಬಹಳ ಸಂತೋಷವಾಯಿತು ಅದರಿಂದ ಅವನ ಅಹಂಕಾರವೂ ಕೂಡ ಹೆಚ್ಚಾಯಿತು. ಆದರೆ ಸದಾ ದೇವರ ಕೃಪೆಯಲ್ಲಿ ಮಗ್ನನಾಗಿದ್ದ ಧಾರ್ಮಿಕ ಶಿಷ್ಯನು ಪ್ರತಿದಿನ ದೇವರ ಭಜನೆಯಲ್ಲಿ ಪಾಲ್ಗೊಳ್ಳುತ್ತಾ ಮನೆಗೆ ಹೋಗುತ್ತಿದ್ದನು, ಆಕಸ್ಮಿಕವಾಗಿ ಅವನ ಕಾಲಿಗೆ ದೊಡ್ಡ ಮುಳ್ಳು ಚುಚ್ಚುತ್ತದೆ.
ಚಿಂತನೆ ಮತ್ತು ಉತ್ತರ
ಈ ದೃಶ್ಯಗಳನ್ನ ಕಂಡ ನಾಸ್ತಿಕ ಶಿಷ್ಯನು ಧಾರ್ಮಿ ಶಿಷ್ಯನಿಗೆ ನಗುತ್ತಾ ಹೇಳುತ್ತಾನೆ ನೀನು ಹೆಚ್ಚಾಗಿ ದೇವರನ್ನು ಆರಾಧಿಸುತ್ತಿದ್ದೀಯ ಅದಕ್ಕಾಗಿ ನೀನು ಕಷ್ಟಗಳನ್ನು ಅನುಭವಿಸುತ್ತಿದ್ದೀಯ ಆದರೆ ನಾನು ಯಾವ ದೇವರನ್ನು ಪೂಜಿಸುತ್ತಿಲ್ಲ ಹಾಗಾಗಿ ನಾನು ಸಂತೋಷವಾಗಿದ್ದೇನೆ!
ಅವನ ಮಾತಿನಿಂದ ಬೇಸರಗೊಂಡ ಧಾರ್ಮಿಕ ಶಿಷ್ಯನು ನೇರವಾಗಿ ಗುರುಗಳ ಹತ್ತಿರ ಹೋಗಿ ಈ ಪ್ರಶ್ನೆಯನ್ನು ಕೇಳುತ್ತಾನೆ. ಗುರುಗಳು ನಗುತ್ತಾ ಉತ್ತರಿಸುತ್ತಾರೆ ನೀನು ಕೇಳಿದ ಪ್ರಶ್ನೆಯ ಉತ್ತರ ತಿಳಿದಿಲ್ಲವೇ? ದೇವರು ನಿನ್ನ ಕಾಲಿಗೆ ಮಾತ್ರ ಮುಳ್ಳನ್ನು ಚುಚ್ಚಿಸಿದ್ದಾನೆ ಆದರೆ ಅವನಿಗೆ ಹಣದಿಂದ ತುಂಬಿದ ಚೀಲವನ್ನು ಕೊಟ್ಟಿದ್ದಾನೆ”
ಕರ್ಮ ಮತ್ತು ಪುಣ್ಯ
ಈ ಕಥೆಯ ಮೂಲಕ ದೇವರ ಕರ್ಮ ಮತ್ತು ಪುಣ್ಯದ ಬಗ್ಗೆ ನಮಗೆ ತಿಳಿಯುತ್ತದೆ. ಧಾರ್ಮಿಕ ಶಿಷ್ಯನು ಇಂದಿನ ಜನ್ಮದಲ್ಲಿ ನೀನು ಮಾಡಿದ ಕರ್ಮದ ಫಲವೇ ಈ ಜನ್ಮದಲ್ಲಿ ಅನುಭವಿಸುತ್ತಿದ್ದೀಯ. ಈ ಜನ್ಮದಲ್ಲಿ ದೇವರ ಪೂಜೆಯ ಫಲವಾಗಿ ನಿನಗೆ ಒಂದು ಮುಳ್ಳು ಚುಚ್ಚಿದಷ್ಟು ನೋವನ್ನ ಅನುಭವಿಸುತ್ತಿದ್ದೀಯ, ಆದರೆ ನಾಸ್ತಿಕ ಶಿಷ್ಯನು ಹಿಂದಿನ ಜನ್ಮದಲ್ಲಿ ತಾನು ಮಾಡಿದ ಒಳ್ಳೆಯ ಕೆಲಸದಿಂದ ಈ ಜನ್ಮದಲ್ಲಿ ಸುಖವನ್ನ ಅನುಭವಿಸುತ್ತಿದ್ದಾನೆ. ಇದರಿಂದಾಗಿ ನಾವು ಮಾಡಿದ ಕರ್ಮಫಲವೇ ಜನ್ಮಗಳ ಮೇಲೆ ಆಧಾರಿತವಾಗಿರುತ್ತದೆ. ನಾವು ಹೆಚ್ಚಾಗಿ ದೇವರ ಪೂಜೆಯನ್ನು ಮಾಡಿದರು ಕೂಡ ನಮ್ಮ ಹಿಂದಿನ ಪಾಪಗಳು ನಮ್ಮನ್ನು ಕಷ್ಟದಲ್ಲಿ ತಳ್ಳಬಹುದು.
ಆಧ್ಯಾತ್ಮಿಕ ದೃಷ್ಟಿಕೋನ
ಈ ವಿಚಾರದಲ್ಲಿ, ನಾವು ಆಧ್ಯಾತ್ಮಿಕ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು. ದೇವರು ಯಾವಾಗಲೂ ನಮ್ಮನ್ನು ಪರೀಕ್ಷಿಸುತ್ತಾನೆ. ನಮ್ಮ ಕಷ್ಟಗಳು, ನಮ್ಮ ಧಾರ್ಮಿಕ ಚಟುವಟಿಕೆಗಳು ಮತ್ತು ನಾವು ಮಾಡಿದ ಕರ್ಮಗಳ ಫಲವೇ. ನಾವು ದೇವರನ್ನು ಪೂಜಿಸುತ್ತಿದ್ದರೂ, ನಮ್ಮ ಕರ್ಮಗಳು ನಮಗೆ ಕಷ್ಟವನ್ನು ತಂದರೆ, ನಾವು ಅದನ್ನು ಒಪ್ಪಿಕೊಳ್ಳಬೇಕು.
ಭಕ್ತಿಯ ಮಹತ್ವ
ಭಕ್ತಿ ಮತ್ತು ನಂಬಿಕೆ, ದೇವರ ಪೂಜೆಗೆ ಮೂಲಭೂತವಾದವು. ನಾವು ದೇವರನ್ನು ಪೂಜಿಸುವಾಗ, ನಮ್ಮ ಮನಸ್ಸಿನಲ್ಲಿ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಪ್ರಾಮುಖ್ಯತೆ ಇರಬೇಕು. ದೇವರ ಏನನ್ನು ಮಾಡುತ್ತಾನೆ ಎಂಬುದರ ಬಗ್ಗೆ ನಮಗೆ ತಿಳಿಯಬೇಕು.
ನಾವು ದೇವರನ್ನು ಪೂಜಿಸುತ್ತಿದ್ದರೂ, ನಾವು ಕಷ್ಟಗಳನ್ನು ಅನುಭವಿಸುತ್ತೇವೆ. ಆದರೆ, ಈ ಕಷ್ಟಗಳು ನಮ್ಮನ್ನು ಬಲಿಷ್ಠವಾಗಿಸುತ್ತವೆ. ನಾವು ದೇವರನ್ನು ಆರಾಧಿಸುತ್ತಿದ್ದಾಗ, ನಾವು ಸದಾ ಧೈರ್ಯದಿಂದ ಬಾಳಬೇಕು.
ಈ ಬ್ಲಾಗ್‌ನಲ್ಲಿ, ದೇವರ ಪೂಜೆಯ ಬಗ್ಗೆ ನಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದೇವೆ. ನಾವು ದೇವರನ್ನು ಪೂಜಿಸುತ್ತಿದ್ದರೂ, ನಮ್ಮ ಹಿಂದಿನ ಕರ್ಮಗಳ ಪರಿಣಾಮವಾಗಿ ಕಷ್ಟಗಳನ್ನು ಅನುಭವಿಸುತ್ತೇವೆ. ಆದರೆ, ದೇವರ ಬಳಿ ಹೋಗುವುದು, ನಮ್ಮನ್ನು ಬಲಿಷ್ಠಗೊಳಿಸುತ್ತದೆ. ನಾವು ಯಾವಾಗಲೂ ಧೈರ್ಯದಿಂದ, ಸದಾ ದೇವರ ಮೇಲೆ ನಂಬಿಕೆಯಿಂದ ಇರುವುದೇ ಮುಖ್ಯವಾಗಿದೆ.
ಸ್ನೇಹಿತರೆ, ನಿಮ್ಮ ಜೀವನದಲ್ಲಿ ದೇವರ ಸನ್ನಿಧಿಗೆ ಹೋಗಿ, ದೇವರನ್ನು ಪೂಜಿಸುತ್ತಿರಿ. ನಿಮ್ಮ ಕಷ್ಟಗಳು ಮತ್ತು ಸಂಕಟಗಳಲ್ಲಿ ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಿ. ದೇವರು ಯಾವಾಗಲೂ ನಿಮ್ಮನ್ನು ಬಲಿಷ್ಠಗೊಳಿಸುತ್ತಾರೆ.
Follow Karunadu Today for more Spiritual information.
Click here to Join Our Whatsapp Group