
"ಅಧ್ಯಾತ್ಮಿಕ ಮಾಹಿತಿ"
ಪ್ರತಿಯೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆ ಒಂದೇ ದೇವಸ್ಥಾನದಲ್ಲಿ ಗರ್ಭಗುಡಿಯ ನಿರ್ಮಾಣ ಮಾಡಿದ್ದು ಯಾಕೆ ಗರ್ಭಗುಡಿಯಲ್ಲೇ ದೇವರ ವಿಗ್ರಹ ಇರುವುದು ಯಾಕೆ ಆ ಗರ್ಭಗುಡಿಯಲ್ಲಿ ಅರ್ಚಕರಿಗೆ ಮಾತ್ರ ಏಕೆ ಪ್ರವೇಶವಿದೆ ಭಕ್ತಾದಿಗಳು ಗರ್ಭಗುಡಿಯಿಂದ ದೂರ ನಿಂತು ಕೈಮುಗಿಯುವುದು ಯಾಕೆ ಅನ್ನುವುದೆಲ್ಲ ಪ್ರತಿಯೊಬ್ಬರಿಗೂ ಪ್ರಶ್ನೆ ಹುಟ್ಟುವುದು ಸಹಜ. ಇಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ ಬನ್ನಿ.
ಸಹಜವಾಗಿ ದೇವಸ್ಥಾನದಲ್ಲಿ ಗರ್ಭಗುಡಿಗೆ ಮಹತ್ವವಾದ ಸ್ಥಾನವಿರುತ್ತೆ ಏಕೆಂದರೆ ಈ ಸ್ಥಳದಲ್ಲಿ ದೇವರ ವಿಗ್ರಹಗಳನ್ನು ಕೆತ್ತನೆ ಮಾಡಿ ಆ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಿ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಗರ್ಭಗುಡಿಯೊಳಗೆ ಅರ್ಚಕರಿಗೆ ಮಾತ್ರ ಪ್ರವೇಶ ವಿರುತ್ತೆ ಏಕೆಂದರೆ ಆ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿದ ಹಾಗೆ ಭಗವಂತನಿಗೆ ಹೇಗೆ ಮಹತ್ವದ ಸ್ಥಾನ ಮಾನ ಇರುತ್ತೋ ಅದೇ ರೀತಿ ಒಬ್ಬ ಅರ್ಚಕನಿಗೆ ಕೂಡ ಅದೇ ರೀತಿ ಸ್ಥಾನ ಮಾನ ಇರುತ್ತೆ ಅಂತವರಿಗೆ ಮಾತ್ರ ದೇವರನ್ನ ಪೂಜಿಸುವ ಅನುಗ್ರಹ ನೀಡಲಾಗುತ್ತೆ.
ಗರ್ಭಗುಡಿಯ ವಾಸ್ತು ವಿನ್ಯಾಸ :
ಒಂದು ಮನೆ ಅಥವಾ ಯಾವುದೋ ಒಂದು ಕಟ್ಟಡವನ್ನ ನಿರ್ಮಾಣ ಮಾಡುವಾಗ ಹೇಗೆ ನಾವು ವಾಸ್ತು ಶಾಸ್ತ್ರದ ಪ್ರಕಾರ ನಿಯಮ ಅನುಸಾರವಾಗಿ ನಮ್ಮ ಕೆಲಸವನ್ನು ಕೈಕೊಳ್ಳುತ್ತೇವೋ. ಅದೇ ರೀತಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡುವಾಗ ವಾಸ್ತು ಶಾಸ್ತ್ರದ ಪ್ರಕಾರನೇ ನಿರ್ಮಾಣ ಮಾಡಲಾಗುತ್ತೆ. ಹಾಗೆ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದೆ ದೇವರ ದರ್ಶನ ಪಡೆಯಲು ವ್ಯವಸ್ಥೆಯನ್ನು ಮಾಡಲಾಗುತ್ತೆ. ಭಕ್ತಾದಿಗಳು ಬರುವ ಪ್ರವೇಶ ದ್ವಾರವು ದೊಡ್ಡದಾಗಿದ್ದರೂ ಕೂಡ ಗರ್ಭಗುಡಿಯ ಪ್ರವೇಶ ದ್ವಾರವು ಯಾವಾಗಲೂ ಚಿಕ್ಕದಾಗಿರುತ್ತೆ. ಭಗವಂತನ ದರ್ಶನ ಪಡೆಯುವಂತಹ ಪ್ರತಿಯೊಬ್ಬ ಭಕ್ತಾದಿಗಳು ದೊಡ್ಡವರಾಗಲಿ ಚಿಕ್ಕವರಾಗಲಿ ತಮ್ಮ ತಲೆಯನ್ನು ಬಾಗಿಸಿ ಯಾವುದೇ ರೀತಿ ಅಹಂ ಇಲ್ಲದೆ ಅಹಂಕಾರವಿಲ್ಲದೆ ಗರ್ಭಗುಡಿಯನ್ನ ಪ್ರವೇಶಿಸಿ ದೇವರ ದರ್ಶನವನ್ನ ಪಡೆಯಬೇಕೆಂದು ಚಿಕ್ಕದಾಗಿ ಮಾಡಲಾಗಿರುತ್ತೆ.
ಗರ್ಭಗುಡಿಯ ವಿಗ್ರಹ :
ಸಾಮಾನ್ಯವಾಗಿ ಕೆಲವೊಂದು ದೇವಾಲಯಗಳಲ್ಲಿ ದೇವರ ವಿಗ್ರಹ ಜೊತೆ ಅವರ ಕುಟುಂಬಸ್ಥರ ವಿಗ್ರಹವನ್ನು ಕೆತ್ತಲಾಗಿರುತ್ತೆ. ಶಿವನ ದೇವಾಲಯಗಳಲ್ಲಿ ಶಿವನ ಜೊತೆ ಪಾರ್ವತಿ,ಗಣೇಶ, ಸುಬ್ರಮಣ್ಯ ಮತ್ತು ನಂದಿಯ ವಿಗ್ರಹವನ್ನು ಕೆತ್ತಲಾಗಿರುತ್ತೆ. ರಾಮನ ದೇವಸ್ಥಾನದಲ್ಲಿ ರಾಮ, ಸೀತೆ ಲಕ್ಷ್ಮಣ ಮತ್ತು ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿರುತ್ತೆ. ವಿಷ್ಣು ದೇವಾಲಯದಲ್ಲಿ ವಿಷ್ಣು ಮತ್ತು ಲಕ್ಷ್ಮಿಯ ವಿಗ್ರಹವನ್ನು ಪೂಜಿಸಲಾಗುತ್ತೆ.ಹಾಗೆ ದೇವಸ್ಥಾನದ ಬಾಗಿಲುಗಳನ್ನ ನಿಗದಿತ ಸಮಯದಲ್ಲಿ ದೇವಸ್ಥಾನದ ಬಾಗಿಲನ್ನು ತೆಗೆಯಲಾಗುತ್ತೆ ಮತ್ತು ನಿಗದಿತ ಸಮಯದಲ್ಲಿ ದೇವಸ್ಥಾನದ ಬಾಗಿಲನ್ನ ಮುಚ್ಚಲಾಗುತ್ತದೆ.
ದೇವಸ್ಥಾನದಲ್ಲಿ ಗರ್ಭಗುಡಿಯನ್ನ ಏಕೆ ನಿರ್ಮಾಣ ಮಾಡಲಾಗಿರುತ್ತದೆ:
ಪ್ರತಿ ಪ್ರಮುಖ ಹಿಂದೂ ದೇವಾಲಯದಲ್ಲಿ, ಸ್ಥಳದ ಪವಿತ್ರತೆಯನ್ನು ಕಾಪಾಡಲು ಗರ್ಭಗುಡಿಯನ್ನು ನಿರ್ಮಿಸಲಾಗುತ್ತದೆ. ಈ ಒಳಗಿನ ಕೋಣೆಯು ದೇವರಿಗೆ ಹೊಂದಿದೆ ಮತ್ತು ದೇವಾಲಯದ ಆಧ್ಯಾತ್ಮಿಕ ಸಮಗ್ರತೆಯನ್ನು ಖಾತ್ರಿಪಡಿಸುವ ಸಂಪೂರ್ಣ ಶುದ್ಧತೆಯನ್ನು ಕಾಪಾಡುವ ಪುರೋಹಿತರಿಗೆ ಮಾತ್ರ ಪ್ರವೇಶಿಸಬಹುದಾಗಿದೆ. ಪ್ರಾಣ ಪ್ರತಿಷ್ಠಾ ಆಚರಣೆಯ ನಂತರ ಉತ್ಪತ್ತಿಯಾಗುವ ಗರ್ಭಗುಡಿಯ ಧನಾತ್ಮಕ ಶಕ್ತಿಯನ್ನು ಸಂರಕ್ಷಿಸಲು, ಪ್ರವೇಶವನ್ನು ಆಯ್ದ ಕೆಲವರಿಗೆ ನಿರ್ಬಂಧಿಸಲಾಗಿದೆ. ಮನಸ್ಸು ಮತ್ತು ದೇಹದ ಶುದ್ಧತೆಯೊಂದಿಗೆ ಈ ಪವಿತ್ರ ಜಾಗವನ್ನು ಪ್ರವೇಶಿಸುವ ವ್ಯಕ್ತಿಗಳು ಜೀವನದ ದುಃಖಗಳಿಂದ ಶಾಂತಿಯನ್ನು ಕಂಡುಕೊಳ್ಳುತ್ತಾರೆ, ಶಕ್ತಿ ಮತ್ತು ಶಾಂತಿಯನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ. ಗರ್ಭಗುಡಿಯು ಆಧ್ಯಾತ್ಮಿಕ ಬೆಳವಣಿಗೆಯ ಪ್ರಬಲ ಸಂಕೇತವಾಗಿದೆ ಮತ್ತು ಪ್ರತಿ ದೇವಾಲಯದಲ್ಲಿ ಅದರ ಉಪಸ್ಥಿತಿಯು ಅತ್ಯಗತ್ಯವಾಗಿರುತ್ತದೆ, ಇದು ದೈವಿಕ ಜೊತೆ ಆಳವಾದ ಸಂಪರ್ಕವನ್ನು ಬೆಳೆಸುತ್ತದೆ. ಪ್ರವೇಶವನ್ನು ಸೀಮಿತಗೊಳಿಸುವ ಮೂಲಕ, ದೇವಾಲಯವು ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಭಕ್ತರನ್ನು ಜ್ಞಾನೋದಯ ಮತ್ತು ಆಂತರಿಕ ಶಾಂತಿಯನ್ನು ಪಡೆಯಲು ಆಶ್ರಯವನ್ನು ಸೃಷ್ಟಿಸುತ್ತದೆ.
Follow Karunadu Today for more Spiritual information like this
Click here to Join Our Whatsapp Group