
ಪರ್ವತಪುರ ಎಂಬ ರಾಜ್ಯದಲ್ಲಿ ಮಕುಜ ಎಂಬ ಕುದುರೆ ರಾಜನ ಬಳಿ ಕೆಲಸಕ್ಕೆ ಸೇರಿತ್ತು. ರಾಜ ಅರಮನೆಯಿಂದ ಹೊರಗೆ ಹೋಗುವಾಗ ಮಕುಜ ಕುದುರೆ ಏರಿ ಸಂಚರಿಸುತ್ತಿದ್ದ. ರಾಜನ ಕುದುರೆಯಾದ ಕಾರಣ ಮಕುಜನಿಗೆ ರಾಜವೈಭೋಗವೇ ದೊರೆಯುತ್ತಿತ್ತು. ಸಮಯಕ್ಕೆ ಸರಿಯಾಗಿ ಊಟ, ಸ್ನಾನ, ನಿದ್ದೆ ಮಾಡಿ ಅದು ತೃಪ್ತಿಯಿಂದ ಇತ್ತು. ಯುದ್ಧದ ಸಮಯದಲ್ಲಿ ಕಾಡಿನಲ್ಲಿ ಸಂಚರಿಸುವಾಗ ಹಾಗೂ ತರಬೇತಿಯ ಸಮಯದಲ್ಲಿ ಮಾತ್ರ ಮಕುಜನಿಗೆ ಗಾಯಗಳಾಗಿ ನೋವಾಗುತ್ತಿತ್ತು.
ಒಮ್ಮೆ ಆಸ್ತೇಯ ಎಂಬ ಕತ್ತೆ ತನ್ನ ಮಾಲೀಕನೊಂದಿಗೆ ರಾಜನ ಬಟ್ಟೆಗಳನ್ನು ಕೊಡಲು ಬಂತು. ಅಲ್ಲಿ ರಾಜನ ಕುದುರೆ ಚೆನ್ನಾಗಿ ಮೇಯುತ್ತಿರುವುದನ್ನು ನೋಡಿ ಅದು ತಾನೂ ಕುದುರೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮನದಲ್ಲಿ ಅಂದುಕೊಂಡಿತು. ತಾನು ಕೂಡ ರಾಜನ ಕುದುರೆಯಾಗಲೇ ಬೇಕು ಎಂಬ ಆಸೆ ಅದಕ್ಕೆ ಹುಟ್ಟಿತು. ಅದು ಮಕುಜ ಕುದುರೆಯ ಸ್ನೇಹ ಮಾಡಿಕೊಂಡು ತನ್ನ ಮನದ ಇಂಗಿತವನ್ನು ಹಂಚಿಕೊಂಡಿತು. ಕುದುರೆ ತನ್ನ ಮನದಲ್ಲಿ ಕೆಲವು ದಿನಗಳ ಕಾಲ ಈ ಬಂಧನದಿಂದ ದೂರವಿರೋಣ ಹಾಗೂ ಸ್ವಚ್ಚಂದವಾಗಿ ಜೀವಿಸೋಣ ಎಂದು ತೀರ್ಮಾನಿಸಿ ಆಸ್ತೇಯನ ಸಲಹೆಗೆ ಒಪ್ಪಿತು.
ಇಬ್ಬರೂ ತಮ್ಮ ಕೆಲಸಗಳನ್ನು ಅದಲು ಬದಲು ಮಾಡಿಕೊಂಡರು. ಆಸ್ತೇಯ ಕತ್ತೆ ರಾಜನ ಅರಮನೆಯಲ್ಲಿ ಕಾಲಕಾಲಕ್ಕೆ ಒಳ್ಳೆಯ ಭೋಜನ ಸವಿದು ಸಂತೋಷದಿಂದ ಬೀಗತೊಡಗಿತು. ಮಕುಜ ಕುದುರೆ ಅಗಸನ ಕೆಲಸ ಮಾಡಿ ನಂತರ ಸ್ವಚ್ಚಂದವಾಗಿ ಅಲೆಯತೊಡಗಿತು. ನಿಸರ್ಗದಲ್ಲಿ ದೊರೆಯುವಂಥ ಆಹಾರಗಳನ್ನು ತಿಂದು ಖುಷಿಪಟ್ಟಿತು. ಈ ಜೀವನ ಎಷ್ಟು ಚೆನ್ನಾಗಿದೆಯಲ್ಲಾ ಎಂದು ಆಸ್ತೇಯ ಮತ್ತು ಅನಿಸತೊಡಗಿತು. ಮಕುಜರಿಗೆ
ಕೆಲವು ದಿನಗಳ ನಂತರ ಕತ್ತೆಗೆ ಯುದ್ಧಗಳಲ್ಲಿ ಭಾಗವಹಿಸಲೇಬೇಕಾಯಿತು. ಆಗ ಅದಕ್ಕೆ ಗಾಯಗಳುಂಟಾದವು. ಛೇ, ನಾನು ಅಗಸನೊಂದಿಗೆ ಕೆಲಸ ಮಾಡುವಾಗ ಸುಖವಾಗಿದ್ದೆ. ಆ ಜೀವನವೇ ಚೆನ್ನಾಗಿದೆ. ನಾನು ಅಗಸನೊಂದಿಗೆ ಕೆಲಸ ಮಾಡಬೇಕು ಎಂದು ಅಂದುಕೊಂಡಿತು. ಅದೇ ರೀತಿ ಕುದುರೆಯೂ ಅರಮನೆಯಲ್ಲಿ ಇರುವಾಗ ಸಿಗುತ್ತಿದ್ದ ಸ್ಥಾನಮಾನ ಅಗಸನ ಬಳಿ ಸಿಗದೆ ಕೊರಗತೊಡೆಗಿತು.
ಒಂದು ದಿನ ಕತ್ತೆ ಹಾಗೂ ಕುದುರೆ ಪರಸ್ಪರ ಭೇಟಿಯಾಗಿ ತಮ್ಮ ತಮ್ಮ ಸ್ಥಾನಗಳಿಗೆ ಮರಳುವುದಾಗಿ ಮಾತನಾಡಿಕೊಂಡವು. ತಮಗೆ ಒದಗಿದ್ದ ಕೆಲಸವೇ ಶ್ರೇಷ್ಠ ಎಂದು ಅವು ಅರಿತು ಮರಳಿ ತಮ್ಮ ಕೆಲಸವನ್ನು ವಹಿಸಿಕೊಂಡು ಸುಖವಾಗಿ ಬಾಳಿದವು.
Follow Karunadu Today for more Policy stories like this
Click here to Join Our Whatsapp Group