
"ಟಾಪ್ 10"
ನೀವು ಈ ಜಗತ್ತಿನಲ್ಲಿ ಮೂರು ತರಹದ ಹಡಗುಗಳನ್ನ ನೋಡಿರುತ್ತೀರಾ ಅವುಗಳಲ್ಲಿ Crago ship,cruise ship, ಮತ್ತು warship ಈ ಮೂರು ಹಡುಗುಗಳಿಗೆ ಬೇರೆ ಬೇರೆ ರೀತಿಯ ವಿಶೇಷಗಳಿವೆ. Cargo ship ಈ ಹಡಗು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸರಕು ಸಾಗಣೆ ಮಾಡಲು ಉಪಯೋಗಿಸಲಾಗುತ್ತದೆ , war ship ಈ ಹಡಗುಗಳನ್ನ ಯುದ್ಧಗಳಿಗೆ ಬಳಸಲಾಗುತ್ತದೆ ಇವುಗಳಲ್ಲಿ ಆ ವಿಭಾಗಗಳಿಗೆ ಸೀಮಿತವಾದ ವ್ಯಕ್ತಿಗಳು ಮಾತ್ರ ಸಂಚರಿಸಬಹುದಾಗಿದೆ ಆದರೆ ಮಾನವ ಸಂಚರಿಸಬಹುದಾದ ಹಡಗುಗಳನ್ನ Cruise ship ಎಂದು ಕರೆಯಲಾಗುತ್ತದೆ. ಈ ಹಡಗುಗಳನ್ನ ಸಮುದ್ರದಲ್ಲಿ ಸಂಚರಿಸುವ ಪಟ್ಟಣ ಎಂದು ಕರೆಯಲಾಗುತ್ತದೆ ಏಕೆಂದರೆ ಒಂದು ಪ್ರದೇಶದಲ್ಲಿ ಸಿಗುವಂತ ಎಲ್ಲಾ ವಸ್ತುಗಳು ಕೂಡ ಈ ಹಡುಗುಗಳಲ್ಲಿ ಸಿಗುತ್ತವೆ.
ಇಂದಿನ ಈ ಲೇಖನದಲ್ಲಿ ನಾವು ಸಮುದ್ರದಲ್ಲಿ ಕಾಣ ಸಿಗುವ ಪ್ರಪಂಚದಲ್ಲಿಯೇ ಅತಿ ದೊಡ್ಡ ಹಡುಗಳಲ್ಲಿ ಶ್ರೀಮಂತಿಕೆಯಿಂದ ಕೂಡಿರುವ ಹಡುಗುಗಳ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
1) ಐಕಾನ್ ಆಫ್ ದಿ ಸೀಸ್ (Icon of the seas )

ಪ್ರಪಂಚದ ಅತಿ ದೊಡ್ಡ ಹಡಗು ಎಂದು ಕರೆಯಲ್ಪಡುವ Icon of the seas ಸರಿಸುಮಾರು 7,600 ಪ್ರಯಾಣಿಕರು ಮತ್ತು 2,350 ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.ಒಟ್ಟು 2,48,663 ಟನ್ ಗಳಷ್ಟು ತೂಕ ಹೊಂದಿದೆ. 365 ಮೀಟರ್ ಅಂದರೆ 1,196 ಅಡಿಗಳಷ್ಟು ಉದ್ದವಾಗಿದೆ.2021 ರಂದು ತಯಾರಿಸಲು ಶುರುಮಾಡಿ 2023 ರಂದು ಸಂಚರಿಸಲು ಆರಂಭಿಸಿತು. ಒಟ್ಟು 2ಬಿಲಿಯನ್ ಡಾಲರ್ ಅಷ್ಟು ಹಣವನ್ನು ತಯಾರಿಸಲು ವೆಚ್ಚ ಮಾಡಲಾಗಿದೆ. ಬೃಹತ್ ಗಾತ್ರವಾದ ಈ ಹಡುಗು ಗಂಟೆಗೆ ಸರಿಸುಮಾರು 40km ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿದೆ.ಈ ಹಡುಗಿನಲ್ಲಿ ವಿವಿಧ ರೀತಿಯ ವಿಶೇಷತೆಗಳನ್ನ ನೀವು ಕಾಣಬಹುದು, Bars, Swimming pool, Theater, Gym, Hotel, ಇನ್ನೂ ವಿವಿಧ ರೀತಿಯ ವ್ಯವಸ್ಥೆಗಳನ್ನು ನೀವು ಇಲ್ಲಿ ಅನುಭವಿಸಬಹುದು.
2) ವಂಡರ್ ಆಫ್ ದಿ ಸೀಸ್ (Wonder of the seas)

ಪ್ರಪಂಚದ ಅತಿ ದೊಡ್ಡ ಹಡಗು ಎಂದು ಕರೆಸಿಕೊಳ್ಳುವ wonder of the seas ಈ ಹಡಗು ಪ್ರಪಂಚದಲ್ಲಿಯೇ ಅತಿ ದೊಡ್ಡ ಹಡುಗಳಲ್ಲಿ 2ನೇ ಸ್ಥಾನದಲ್ಲಿದೆ. ಈ ಹಡುಗು ಸರಿಸುಮಾರು 7.084 ಪ್ರಯಾಣಿಕರು ಮತ್ತು 2867 ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಒಟ್ಟು 2,35,600 ಗಳಷ್ಟು ತೂಕ ಹೊಂದಿರುವ ಈ ಹಡುಗು ಐಷಾರಾಮಿ ಹಡುಗುಗಳಲ್ಲಿ ಈ ಹಡಗು ಕೂಡ ಒಂದು.362 ಮೀಟರ್ ಅಂದರೆ 1,187 ಅಡಿಗಳಷ್ಟು ಉದ್ದವಾಗಿದೆ. 2018 ರಲ್ಲಿ ತಯಾರಿಸಲು ಶುರುಮಾಡಿ 2022 ರಂದು ಸಂಚರಿಸಲು ಆರಂಭಿಸಿತು. ಈ ಹಡುಗನ್ನ ತಯಾರಿಸಲು ಒಟ್ಟು 1.35 ಬಿಲಿಯನ್ ಡಾಲರ್ ಅಷ್ಟು ಹಣ ವೆಚ್ಚ ಮಾಡಲಾಗಿದೆ. ಬೃಹತ್ ಗಾತ್ರದ ಈ ಹಡುಗು ಗಂಟೆಗೆ 40 ಕಿಲೋಮೀಟರ್ ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿದೆ.
3) ಸಿಂಫನಿ ಆಫ್ ದಿ ಸೀಸ್ (Symphony of the seas)

ಈ ಹಡಗು ಪ್ರಪಂಚದಲ್ಲಿಯೇ ಅತ್ಯಂತ ಬೃಹತ್ ಗಾತ್ರದ ಹಡಗುಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಒಟ್ಟು 6,680 ಪ್ರಯಾಣಿಕರು ಮತ್ತು 2200 ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ಹಡಗು ಸರಿಸುಮಾರು 2,28,081 ಟನ್ ಗಳಷ್ಟು ತೂಕ ಹೊಂದಿದೆ. 361 ಮೀಟರ್ ಅಂದರೆ 1,185 ಅಡಿಗಳಷ್ಟು ದೊಡ್ಡದಾದ ಈ ಹಡಗು 2015 ರಿಂದ ತಯಾರಿಸಲು ಮಾಡಿ 2017ರಲ್ಲಿ ಈ ಹಾಡುಗಳನ್ನು ಸಂಪೂರ್ಣವಾಗಿ ತಯಾರಿಸಲಾಯಿತು. ಈ ಬೃಹತ್ ಗಾತ್ರದ ಹಡುಗನ್ನ ತಯಾರಿಸಲು ಸರಿಸುಮಾರು 1 ಬಿಲಿಯನ್ ಡಾಲರ್ ಹಣ ವೆಚ್ಚ ಮಾಡಲಾಗಿದೆ. ಗಂಟೆಗೆ 40 ಕಿಲೋಮೀಟರ್ ಅಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಹಡಗು ವಿವಿಧ ರೀತಿಯ ವ್ಯವಸ್ಥೆಗಳನ್ನ ಹೊಂದಿದೆ.
4) ಹಾರ್ಮನಿ ಆಫ್ ದಿ ಸೀಸ್ (Harmony of the seas)

2015 ರಿಂದ ಪ್ರಾರಂಭವಾದ ಈ ಹಡಗು ಪ್ರಪಂಚದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. ಸರಿಸುಮಾರು 6780 ಪ್ರಯಾಣಿಕರು ಮತ್ತು 2300 ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ಹಡಗು 2,26,963 ಟನ್ ಗಳಷ್ಟು ತೂಕ ಹೊಂದಿದೆ. ಬರೋಬ್ಬರಿ 362 ಮೀಟರ್ ಅಂದರೆ 1,188 ಅಡಿಗಳಷ್ಟು ಉದ್ದವಾದ ಈ ಹಡಗು 2012 ರಿಂದ 2015 ರ ವರೆಗೆ ತಯಾರಿಸಲಾಯಿತು. ಸರಿ ಸುಮಾರು 1.35 ಬಿಲಿಯನ್ ಡಾಲರ್ ಅಷ್ಟು ಹಡಗನ್ನ ತಯಾರಿಸಲು ಹಣ ವೆಚ್ಚ ಮಾಡಲಾಗಿದೆ. ಗಂಟೆಗೆ 45km ರಷ್ಟು ಸಂಚರಿಸುವ ಈ ಹಡಗು ವಿವಿಧ ರೀತಿಯ ವಿಶೇಷತೆಗಳನ್ನ ನೀವು ಕಾಣಬಹುದು. Bars, Swimming pool, Theater,Gym,Hotel, 20,000 ಮರಗಳನ್ನು ಈ ಬೃಹತ್ ಗಾತ್ರದ ಹಡುಗಿನಲ್ಲಿ ಇರುವುದು ವಿಶೇಷತೆ.
5) ಓಸಿಸ್ ಆಫ್ ದಿ ಸೀಸ್ (Oasisi of the seas)

2009 ರಂದು ಪ್ರಾರಂಭವಾದ ಈ ಹಡಗು ಸರಿ ಸುಮಾರು 6,699 ಪ್ರಯಾಣಿಕರು ಮತ್ತು 2,181 ಸಿಬ್ಬಂದಿಗಳನ್ನು ಹೊತ್ತುವ ಸಾಮರ್ಥ್ಯವನ್ನ ಹೊಂದಿದೆ. ಈ ಬೃಹತ್ ಗಾತ್ರದ ಹಡಗನ್ನ ರಾಯಲ್ ಕೆರೆಬಿಯನ್ ಅಂತರಾಷ್ಟ್ರೀಯ ಕಂಪನಿಯು ತಯಾರಿಸಿದ್ದು,ಸರಿಸುಮಾರು 2,26,838 ಟನ್ ತೂಕ ಹೊಂದಿದ್ದು ಐಷಾರಾಮಿ ಹಡುಗುಗಳಲ್ಲಿ ಈ ಹಡಗು ಕೂಡ ಒಂದು. ಬರೋಬ್ಬರಿ 360 ಮೀಟರ್ ಅಂದರೆ 1,181 ಅಡಿಗಳಷ್ಟು ಉದ್ದವಾದ ಈ ಹಡಗು 2007 ರಿಂದ ತಯಾರಿಸಲು ಮಾಡಿ 2009 ರಂದು ಪೂರ್ಣಗೊಳಿಸಲಾಗುತ್ತದೆ. ಬೃಹತ್ ಗಾತ್ರದ ಹಡಗನ್ನ ತಯಾರಿಸಲು ಸರಿಸುಮಾರು 1.4 ಬಿಲಿಯನ್ ಡಾಲರ್ ಅಷ್ಟು ಹಣ ವೆಚ್ಚ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನಗಳನ್ನ ಅಳವಡಿಸಲಾದ ಈ ಹಡಗು ಗಂಟೆಗೆ 42 ಕಿಲೋಮೀಟರ್ಗಳಷ್ಟು ಚಲಿಸುತ್ತದೆ. ಇನ್ನು ಈ ಹಡುಗಿನಲ್ಲಿ ಇರುವಂತಹ ವಿಶೇಷ ಏನಪ್ಪಾ ಅಂದರೆ ಇದರಲ್ಲಿ ನೀವು central park,Bar,hotel,Gym, swimming pool,Theater ಇನ್ನು ಬೇರೆ ಬೇರೆ ರೀತಿಯ ಸೌಲಭ್ಯಗಳನ್ನು ನೀವು ಕಾಣಬಹುದು.
Follow Karunadu Today for more Top ten like this
Click here to Join Our Whatsapp Group