1) ಜಗತ್ತಿನಲ್ಲಿ ಇರುವ ಪ್ರತಿಯೊಂದು ಜೀವಿಗೂ ಕೂಡ ನೀರು ಎನ್ನುವುದು ಅತ್ಯಮೂಲ್ಯ ಅಂಶ. ಆಹಾರವಿಲ್ಲದೆ ಹಲವು ದಿನಗಳ ಕಾಲ ಮನುಷ್ಯನು ಬದುಕಬಹುದು ಆದರೆ ನೀರು ಇಲ್ಲದೆ ಮಾತ್ರ ಬದುಕುವುದು ಸಾಧ್ಯವಿಲ್ಲ. ಆದರೆ  ಪ್ರಪಂಚದ ದುಬಾರಿ ನೀರಿನ ಬಾಟಲ್ ಅಲ್ಲಿ ಇರುವ ನೀರನ್ನು ನೀವು ಕುಡಿಯಬೇಕೆಂದರೆ ಅದಕ್ಕೆ 43 ಲಕ್ಷ ರೂಪಾಯಿಯನ್ನು ನೀವು ಪಾವತಿಸಬೇಕು. ಹೌದು, ಇದು ನಿಮಗೆ ಅಚ್ಚರಿ ಎನಿಸಿದರು ಕೂಡ ಸತ್ಯ. ನಾವೆಲ್ಲರು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯು ತನ್ನ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುವ ಸಲುವಾಗಿ ಸಾಕಷ್ಟು ಖರ್ಚು ಮಾಡಿ ಅತ್ಯಂತ ಪರಿಶುದ್ದ ನೀರನ್ನು ಹೊಂದಿರುವ ಬಾಟಲಿಯನ್ನು ಖರೀದಿಸಿದ್ದಾನೆ ಎಂದು ಅನೇಕ ಬಾರಿ ಕೇಳಿದ್ದೇವೆ. ಆದರೆ ಅದಕ್ಕಿಂತಲು ಪ್ರಪಂಚದ ದುಬಾರಿ ನೀರಿನ ಬಾಟಲ್ ಪ್ರಪಂಚದಲ್ಲಿದ್ದು ಅದರ ಹೆಸರು “ACQUA DI CRISTALLO TRIBUTO A MODIGLIANI”. ಈ ಬಾಟಲಿಯನ್ನು “Fernando Altamirano” ಅವರು 23 ಕ್ಯಾರೆಟ್ ಚಿನ್ನದಿಂದ ಮಾಡಿದ್ದಾರೆ. ಈ ಬಾಟಲಿಯ ಮತ್ತೊಂದು ವಿಶೇಷತೆ ಏನೆಂದರೆ ಇದರ ಒಳಗಿರುವ ನೀರಿನ ಜೊತೆಗೆ 5 ಮಿಲಿಗ್ರಾಂ ನಷ್ಟು “gold dust” ಕೂಡ ಇರುತ್ತದೆ. ಅದೇನೇ ಹೇಳಿ ನೀರು ಯಾವತ್ತಿದ್ದರು ಕೂಡ ನೀರೇ ಅಲ್ಲವೆ. ಶ್ರೀಮಂತ ವ್ಯಕ್ತಿಗಳು ತಮ್ಮ ಶೋಕಿಗಾಗಿ ಹೇಗೆಲ್ಲ ಹಣ ಖರ್ಚು ಮಾಡುತ್ತಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.

2) ರೈಲಿನ ಕಂಬಿಗಳನ್ನು ನೀವು ಸಹಜವಾಗಿ ನೋಡಿರುತ್ತೀರ. ವರ್ಷಪೂರ್ತಿ ಅದರ ಮೇಲೆ ಗಾಳಿ ಮತ್ತು ಮಳೆಯ ನೀರು ಸುರಿದರು ಕೂಡ ಅದು ತುಕ್ಕು ಹಿಡಿಯುವುದಿಲ್ಲ. ಎಂದಾದರು ಏಕೆ ತುಕ್ಕು ಹಿಡಿಯುವುದಿಲ್ಲ ಎಂದು ಆಲೋಚಿಸಿದ್ದೀರ? ಅಕಸ್ಮಾತ್ ಯೋಚಿಸಿ ನಿಮಗೆ ಉತ್ತರ ಸಿಗದಿದ್ದರೆ ಈಗ ಹೇಳುತ್ತೇನೆ ಕೇಳಿ. ರೈಲಿನ ಕಂಬಿಗಳನ್ನು ಸಾಧಾರಣ ಕಬ್ಬಿಣದಿಂದ ಮಾಡಲಾಗಿರುವುದಿಲ್ಲ. ತುಕ್ಕು ಹಿಡಿಯದೆ ಇರಲಿ ಎಂದು ಅದನ್ನು ತಯಾರಿಸುವ ವೇಳೆ ಹಲವಾರು ಮಿಶ್ರಣಗಳನ್ನು ಸೇರಿಸಿರುತ್ತಾರೆ. ಅದರಲ್ಲಿ ಪ್ರಮುಖವಾದದ್ದು “HADFIELD MANGANESE STEEL”. ಶೇಕಡ 12 ರಿಂದ 20ರಷ್ಟು MANGANESE ಅನ್ನು ಕಂಬಿಗಳ ತಯಾರಿ ನಡೆಸುವ ವೇಳೆ ಮಿಶ್ರಣ ಮಾಡಲಾಗುತ್ತದೆ. ಆದ್ದರಿಂದ ಕಂಬಿಗಳು ತುಕ್ಕು ಹಿಡಿಯುವುದಿಲ್ಲ. ಆದರೆ ರೈಲಿನ ಡಬ್ಬಿಗಳನ್ನು ಮಾತ್ರ ಸಾಧಾರಣ ಕಬ್ಬಿಣದಿಂದ ಮಾಡಿರಲಾಗುತ್ತದೆ ಆದರೆ ತುಕ್ಕು ಹಿಡಿಯದಿರಲಿ ಎಂದು ಅದಕ್ಕೆ ಪೇಂಟ್ ಮಾಡಲಾಗಿರುತ್ತದೆ.

3) ನೀವು ಆಸ್ಪತ್ರೆಯಲ್ಲಿ ಸಹಜವಾಗಿ ವೈದ್ಯರು “Ultra sound ಅಥವ ECG” ಮಾಡುವ ವೇಳೆ ರೋಗಿಯ ಮೈಮೇಲೆ gel ಒಂದನ್ನು ಹಚ್ಚುವುದನ್ನು ನೋಡಿರುತ್ತೀರ. ಏಕೆ ಆ ಜೆಲ್ ಅನ್ನು ಹಚ್ಚುತ್ತಾರೆ ಗೊತ್ತೆ? ನೀರು ಮತ್ತು propelyn ನಿಂದ ಮಾಡಿರುವ ಈ ಜೆಲ್ ಅನ್ನು “ECG ಜೆಲ್, Electrode ಜೆಲ್ ಅಥವ sonography ಜೆಲ್” ಎಂದು ಕರೆಯುತ್ತಾರೆ. Ultra sound machine ಗಳು ಸೃಷ್ಟಿಸುವ ಶಬ್ದದ ತರಂಗಗಳು ಮನುಷ್ಯನ ದೇಹದ ಒಳಗೆ ಹೋಗಲು ಈ ಜೆಲ್ ಸಹಾಯ ಮಾಡುತ್ತದೆ. ಅಕಸ್ಮಾತ್ ಈ ಜೆಲ್ ಅನ್ನು ರೋಗಿಯ ದೇಹಕ್ಕೆ ಹಚ್ಚದೆ ಹೋದರೆ Ultra sound machine ಗಳು ಸೃಷ್ಟಿಸುವ ಶಬ್ದದ ತರಂಗಗಳು ಮನುಷ್ಯನ ದೇಹದ ಒಳಗೆ ಹೋಗಲು ಕಷ್ಟವಾಗುತ್ತದೆ. ಇದರಿಂದ ರೋಗಿಯ ದೇಹದ ಒಳಗೆ ಇರುವ ಸಮಸ್ಯೆಯನ್ನು ಕಂಡುಹಿಡಿಯಲು ಕಷ್ಟವಾಗುತ್ತದೆ. ಆದ್ದರಿಂದ ಈ jel ಅನ್ನು ಹಚ್ಚುತ್ತಾರೆ.

4) ದೇವರು ಈ ನಮ್ಮ ಭೂಮಿಯ ಮೇಲಿರುವ ಅನೇಕ ಜೀವಿಗಳಿಗೆ ಮೆದುಳನ್ನು ನೀಡಿದ್ದಾನೆ. ಆದರೆ ಮನುಷ್ಯನಿಗೆ ಮಾತ್ರ ಬುದ್ದಿಶಕ್ತಿ ಹೊಂದಿರುವ ಒಂದು ಮೆದುಳನ್ನು ನೀಡಿದ್ದಾನೆ. ಆದರೆ ಒಂದು ಜೀವಿಯಿದ್ದು ಆ ಜೀವಿಗೆ ಬರೋಬ್ಬರಿ 32 ಮೆದುಳುಗಳನ್ನು ನೀಡಿದ್ದಾನೆ. ಆ ಜೀವಿಯ ಹೆಸರೇ “ಜಿಗಣೆ”. ಸಹಜವಾಗಿ ಮಲೆನಾಡಿನಲ್ಲಿ ಹೆಚ್ಚು ಕಾಣಸಿಗುವ ಈ ಜೀವಿಗೆ 32 ಮೆದುಳುಗಳಿದ್ದು ಅದರ ಜೊತೆಗೆ 10 ಹೊಟ್ಟೆ, 9 ಅಂಡಕೋಶ ಹಾಗು ನೂರಾರು ಹಲ್ಲುಗಳಿರುತ್ತವೆ.

5) Diomedeidae ಪ್ರಜಾತಿಗೆ ಸೇರಿದ “Albatross” ಎನ್ನುವ ಪಕ್ಷಿಯು ದಕ್ಷಿಣ ಮತ್ತು ಉತ್ತರ ಪೆಸಿಫಿಕ್ ಸಾಗರದಲ್ಲಿ ಕಾಣಸಿಗುತ್ತದೆ. ಈ ಪಕ್ಷಿಯ ವಿಶೇಷತೆ ಏನೆಂದರೆ ದಿನಕ್ಕೆ 10 ಸಾವಿರ ಮೈಲಿಗಳಷ್ಟು ಹಾರಬಲ್ಲ ಶಕ್ತಿ ಇದಕ್ಕಿದೆ. ಅಂದರೆ 16,093 ಕಿಲೋಮೀಟರ್. ಈ ಪಕ್ಷಿಯು ತನ್ನ ಜೀವಿತಾವದಿಯಲ್ಲಿ 5 ರಿಂದ 10 ವರ್ಷಗಳ ಕಾಲ ಸತತವಾಗಿ ಆಕಾಶದಲ್ಲಿ ಹಾರಬಲ್ಲ ಶಕ್ತಿ ಹೊಂದಿದೆ. ಆಹಾರ ಸೇವನೆ, ಮಲಗುವುದು ಎಲ್ಲವನ್ನು ಹಾರುತ್ತಿರುವಾಗಲೇ ಮಾಡುವ ಈ ಪಕ್ಷಿಯು ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ಭೂಮಿಗೆ ಬಂದು ಇಳಿಯುತ್ತದೆ. ನಿಮಗಿದು ಅಚ್ಚರಿ ಎನಿಸಿದರು ಕೂಡ ಸತ್ಯ.

ಈ ರೀತಿಯ ಹೆಚ್ಚಿನ ವಿಸ್ಮಯ ಸಂಗತಿಗಳಿಗೆ ಇಂದೇ ಕರುನಾಡು Today ಅನುಸರಿಸಿ

ನಮ್ಮ Whatsapp ಗ್ರೂಪ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ ​